ನೆಟ್ ಬೌಲರ್ ಗಳನ್ನೆಲ್ಲಾ ಆಡಿಸ್ತಾರಲ್ಲಾ ಧೋನಿ! ಟ್ರೋಲ್ ಗೊಳಗಾದ ಮೋನು ಕುಮಾರ್

ಸೋಮವಾರ, 26 ಅಕ್ಟೋಬರ್ 2020 (10:46 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ಪರ ವೇಗಿ ಮೋನು ಕುಮಾರ್ ಪದಾರ್ಪಣೆ ಮಾಡಿದ್ದರು. ಆದರೆ ಇದುವರೆಗೆ ಹೆಸರು ಕೇಳಿಯೇ ಗೊತ್ತಿಲ್ಲದ ವೇಗಿಯನ್ನು ಕಣಕ್ಕಿಳಿಸಿದ ಧೋನಿ ಈ ವಿಚಾರವಾಗಿ ಟ್ರೋಲ್ ಗೊಳಗಾಗಿದ್ದಾರೆ.


ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಳೆದ ಎರಡು ಸೀಸನ್ ಗಳಲ್ಲಿ ಅವಕಾಶವೇ ಇಲ್ಲದೇ ಕುಳಿತಿದ್ದ ಮೋನು ಕುಮಾರ್ ನನ್ನು ಕಣಕ್ಕಿಳಿಸಿದ್ದು ನೋಡಿ ನೆಟ್ಟಿಗರು ‘ನೆಟ್ ಬೌಲರ್ ಗಳನ್ನೆಲ್ಲಾ ಕಣಕ್ಕಿಳಿಸುತ್ತಿದ್ದಾರಲ್ಲಾ ಧೋನಿ’ ಎಂದು ತಮಾಷೆ ಮಾಡಿದ್ದಾರೆ. ಶ್ರಾದ್ಧೂಲ್ ಠಾಕೂರ್ ಸ‍್ಥಾನದಲ್ಲಿ ಅವಕಾಶ ಪಡೆದ ಮೋನು ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ ನೆಟ್ಟಿಗರು ಮಾತ್ರ ಇವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರಿಂದ ಮೊದಲ ಪಂದ್ಯದಲ್ಲೇ ಸುದ್ದಿಯಾದರು. ಜಾರ್ಖಂಡರ್ ಮೂಲದ ಮೋನು ಕುಮಾರ್ ರನ್ನು ಸಿಎಸ್ ಕೆ ಎರಡು ವರ್ಷಗಳ ಹಿಂದೆ 20 ಲಕ್ಷ ರೂ. ಗಳಿಗೆ ಖರೀದಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ