ಐಪಿಎಲ್ 13: ಕಿಂಗ್ಸ್ ಇಲೆವೆನ್ ಗೆ ಇಂದು ಕೆಕೆಆರ್ ಸವಾಲು

ಸೋಮವಾರ, 26 ಅಕ್ಟೋಬರ್ 2020 (10:38 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.


ಪ್ಲೇ ಆಫ್ ಹಂತದ ನಿಟ್ಟಿನಲ್ಲಿ ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಎರಡೂ ತಂಡಗಳು ಅಗ್ರ ನಾಲ್ಕರೊಳಗೆ ಸ್ಥಾನ ಉಳಿಸಿಕೊಳ್ಳಲು ಪೈಪೋಟಿ ನಡೆಸಿವೆ. ಆದರೆ ನಾಯಕತ್ವ ಬದಲಾವಣೆ ಬಳಿಕ ಕೆಕೆಆರ್ ಸೊರಗಿದ್ದು, ಕಳೆದ ಎರಡು ಪಂದ್ಯಗಳಲ್ಲಿ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ಸದ್ಯಕ್ಕೆ ಹೊಸ ಗೆಲುವಿನ ಉತ್ಸಾಹದಲ್ಲಿರುವ ಪಂಜಾಬ್ ಗೆ ಕೆಕೆಆರ್ ಮಣಿಸುವುದು ಕಷ್ಟವಾಗದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ