ಐಪಿಎಲ್ 13: ಚೆನ್ನೈ ಸೂಪರ್ ಕಿಂಗ್ಸ್ ಗೆ ಶುಭ ಸುದ್ದಿ

ಮಂಗಳವಾರ, 22 ಸೆಪ್ಟಂಬರ್ 2020 (11:04 IST)
ದುಬೈ: ಐಪಿಎಲ್ 13 ರ ದ್ವಿತೀಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದ್ದು, ಅದಕ್ಕೂ ಮೊದಲು ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.


ದುಬೈಗೆ ಬಂದಿಳಿದ ಬಳಿಕ ಚೆನ್ನೈ ಪಾಳಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಬೌಲರ್ ಋತುರಾಜ್ ಗಾಯಕ್ ವಾಡ್ ಕೂಡಾ ಸೋಂಕಿತರಲ್ಲಿ ಒಬ್ಬರಾಗಿದ್ದರು. ಹೀಗಾಗಿ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಈಗ ಕೊರೋನಾದಿಂದ ಚೇತರಿಸಿಕೊಂಡಿರುವ ಗಾಯಕ್ ವಾಡ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು, ಇಂದಿನ ಪಂದ್ಯ ಆಡಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ