ಐಪಿಎಲ್ 13 ರಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಸಿಎಸ್ ಕೆ ಕ್ರಿಕೆಟಿಗ

ಗುರುವಾರ, 1 ಅಕ್ಟೋಬರ್ 2020 (11:59 IST)
ದುಬೈ: ಐಪಿಎಲ್ 13 ರಲ್ಲಿ ಕೊರೋನಾ ಕಾರಣದಿಂದಾಗಿ ಬಿಸಿಸಿಐ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿದೆ. ಅದರಲ್ಲೂ ಆಟಗಾರರಿಗೆ ಕೊರೋನಾ ತಗುಲದಂತೆ ಜೈವಿಕ ಸುರಕ್ಷಾ ವಲಯ ನಿರ್ಮಿಸಿದೆ.


ಆದರೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್, ಕೇರಳ ಮೂಲದ ಕೆಎಂ ಆಸಿಫ್ ಈ ನಿಯಮ ಬ್ರೇಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ತಮ್ಮ ಹೋಟೆಲ್ ರೂಂ ಕೀ ಮರೆತಿದ್ದ ಆಸಿಫ್ ಬದಲಿ ಕೀ ಪಡೆಯಲು ಸುರಕ್ಷಿತ ತಾಣವಲ್ಲದ ಹೋಟೆಲ್ ರಿಸೆಪ್ಷನ್ ಗೆ ಸಿಎಸ್ ಕೆ ಮ್ಯಾನೇಜ್ ಮೆಂಟ್ ಗೆ ತಿಳಿಸದೇ ತೆರಳಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದ ಅವರನ್ನು ದಂಡನೆಗೆ ಗುರಿಪಡಿಸಲು ಅವಕಾಶಗಳೂ ಇವೆ. ಆದರೆ ಸದ್ಯಕ್ಕೆ ಅವರಿಗೆ ಎಚ್ಚರಿಕೆ ಕೊಟ್ಟು ಬಿಟ್ಟು ಬಿಡುವ ಸಾಧ‍್ಯತೆಯೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ