ಐಪಿಎಲ್ 13 ಮೂಲಕ ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನೂ ಕಂಡುಕೊಂಡ ಟೀಂ ಇಂಡಿಯಾ

ಬುಧವಾರ, 11 ನವೆಂಬರ್ 2020 (11:01 IST)
ಮುಂಬೈ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾವನ್ನು ಮುನ್ನಡೆಸುವ ಸಮರ್ಥ ನಾಯಕ ಯಾರು? ಈ ಪ್ರಶ್ನೆಗೆ ಈ ಐಪಿಎಲ್ ಉತ್ತರ ನೀಡಿದೆ.


ಐಪಿಎಲ್ ನಲ್ಲಿ ಗಮನಸೆಳೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಮತ್ತು ಡೆಲ್ಲಿ ನಾಯಕ ಶ್ರೇಯಸ್ ಐಯರ್. ಇವರಿಬ್ಬರು ಕೊಹ್ಲಿ ಬಳಿಕ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ತೋರಿದ್ದಾರೆ. ಈ ಪೈಕಿ ರಾಹುಲ್ ಹೆಸರು ಮುಂಚೂಣಿಯಲ್ಲಿದೆ. ಈಗಾಗಲೇ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಆಡಿರುವ ರಾಹುಲ್, ಈಗಾಗಲೇ ಉಪನಾಯಕತ್ವದ ಹೊಣೆಯನ್ನೂ ಪಡೆದಿದ್ದಾರೆ. ಹೀಗಾಗಿ ಕೊಹ್ಲಿ ಬಳಿಕ ಮೊದಲ ಆಯ್ಕೆ ರಾಹುಲ್ ಆಗಿರಬಹುದು. ಅದಾದ ಬಳಿಕ ಶ್ರೇಯಸ್ ಐಯರ್ ಗೂ ಒಂದು ಅವಕಾಶವಿದೆ. ಐಯರ್ ಇನ್ನಷ್ಟೇ ರಾಷ್ಟ್ರೀಯ ತಂಡದಲ್ಲಿ ಪ್ರಭಾವ ಬೀರಬೇಕಿದೆ. ಆದರೆ ಅವರ ಬ್ಯಾಟಿಂಗ್ ನೋಡಿದರೆ, ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಯುವ ಡೆಲ್ಲಿ ತಂಡವನ್ನು ಫೈನಲ್ ವರೆಗೆ ಕೊಂಡೊಯ್ದ ಶ್ರೇಯಸ್ ಮುಂದೊಂದು ದಿನ ಟೀಂ ಇಂಡಿಯಾ ನಾಯಕರಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ