ಐಪಿಎಲ್ 13:ಹಾರ್ದಿಕ್ ಪಾಂಡ್ಯ ‘ಆತ್ಮನಿರ್ಭರ್’ ಔಟ್! ನೆಟ್ಟಿಗರ ಟ್ರೋಲ್

ಗುರುವಾರ, 24 ಸೆಪ್ಟಂಬರ್ 2020 (10:43 IST)
ದುಬೈ: ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯ ಸ್ವಯಂ ವಿಕೆಟ್ ಕೈಚೆಲ್ಲಿದ ಪರಿಗೆ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.


ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಕ್ರೀಸ್ ನಲ್ಲಿ ತೀರಾ ಹಿಂದೆ ಅಂದರೆ ಸ್ಟಂಪ್ ಗೆ ತಾಗಿದಂತೆ ನಿಂತಿದ್ದಲ್ಲದೆ, ತೀರಾ ಕೆಳಗೆ ಬಂದ ಬಾಲ್ ನ್ನು ಹಾಗೇ ಬಿಡಲು ಹೋಗಿ ತಾವಾಗಿಯೇ ಹಿಟ್ ವಿಕೆಟ್ ಆಗಿದ್ದರು. ಅವರು ಈ ರೀತಿ ತಾವಾಗಿಯೇ ವಿಕೆಟ್ ಕಳೆದುಕೊಂಡಿದ್ದನ್ನು ಟ್ವಿಟರಿಗರು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ’ ಯೋಜನೆಗೆ ಹೋಲಿಸಿ ತಮಾಷೆ ಮಾಡಿದ್ದಾರೆ. ಅಂದರೆ ತಮ್ಮ ವಿಕೆಟ್ ನ್ನು ತಾವೇ ದಾನ ಮಾಡಿ ಆತ್ಮನಿರ್ಭರ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ