ಐಪಿಎಲ್ 13: ವಿರಾಟ್ ಕೊಹ್ಲಿ ಹೊಗಳಿದ ಪಂಜಾಬ್ ಮಾಲಕಿ ಪ್ರೀತಿ ಜಿಂಟಾ
ಮಂಗಳವಾರ, 29 ಸೆಪ್ಟಂಬರ್ 2020 (11:14 IST)
ದುಬೈ: ಫಾರ್ಮ್ ಕಳೆದುಕೊಂಡು ಟೀಕೆಗೊಳಗಾಗುತ್ತಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಜಿಂಟಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 13 ರಲ್ಲಿ ಇದುವರೆಗೆ ಉತ್ತಮ ರನ್ ಗಳಿಸದ ಕೊಹ್ಲಿ ಬಗ್ಗೆ ಎಲ್ಲರೂ ಟೀಕೆ ಮಾಡುವವರೇ. ಆದರೆ ಪಂಜಾಬ್ ಮಾಲಕಿ ಪ್ರೀತಿ ಜಿಂಟಾ ಕೊಹ್ಲಿಯನ್ನು ಹೊಗಳಿದ್ದು, ಫಾರ್ಮ್ ತಾತ್ಕಾಲಿಕ ಆದರೆ ಕ್ಲಾಸ್ ಶಾಶ್ವತ ಎಂದಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಬೌಂಡರಿ ಗಳಿಸಿ ತಂಡಕ್ಕೆ ಥ್ರಿಲ್ಲಿಂಗ್ ಗೆಲುವು ಕೊಡಿಸಲು ನೆರವಾದ ಕೊಹ್ಲಿಯನ್ನು ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದಾರೆ.