ಈ ಬಾರಿಯ ಐಪಿಎಲ್ ಕ್ರೀಡಾಕೂಟ ದಾಖಲೆಯ 400 ಶತಕೋಟಿ ವೀಕ್ಷಣಾ ನಿಮಿಷ ದಾಖಲು ಮಾಡಿದೆ. ಇದರೊಂದಿಗೆ 2019 ರ ಏಕದಿನ ವಿಶ್ವಕಪ್ ನಲ್ಲಿ ದಾಖಲಾಗಿದ್ದ 344 ಶತಕೋಟಿ ವೀಕ್ಷಣಾ ನಿಮಿಷದ ದಾಖಲೆ ಮುರಿದುಬಿದ್ದಿದೆ. ಒಟ್ಟಾರೆ 40.5 ಕೋಟಿ ಮಂದಿ ಟಿವಿಯಲ್ಲಿ ಐಪಿಎಲ್ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರೀಡಾಕೂಟ ಎಂಬ ದಾಖಲೆಗೆ ಐಪಿಎಲ್ ಪಾತ್ರವಾಗಿದೆ.