ಇದೀಗ ಅವರ ಗಾಯದ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಸ್ವಲ್ಪ ಸಮಸ್ಯೆ ಇರುವುದು ನಿಜ. ಅದಕ್ಕೆ ಪರಿಹಾರ ಪಡೆಯುತ್ತಿದ್ದೇನೆ. ಜನ ಏನು ಹೇಳ್ತಿದ್ದಾರೆ, ನನಗೆ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ನಾನು ನಿರಂತರವಾಗಿ ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್ ಜತೆ ಸಂಪರ್ಕದಲ್ಲಿದ್ದೆ. ಐಪಿಎಲ್ ಚುಟುಕು ಕ್ರಿಕೆಟ್ ಆಗಿದ್ದರಿಂದ ಆಡಲು ತೀರ್ಮಾನಿಸಿ ಆಡಿದೆ. ಆದರೆ ಬಿಳಿ ಚೆಂಡಿನಲ್ಲಿ ಆಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಸುದೀರ್ಘ ಮಾದರಿಯ ಆಟಕ್ಕೆ ಮರಳುವ ಮೊದಲು ಸಂಪೂರ್ಣ ಫಿಟ್ ಆಗಿರಬೇಕು. ಅದಕ್ಕಾಗಿ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.