ಐಪಿಎಲ್ 13: ಸೋತು ಪ್ಲೇ ಆಫ್ ಹಾದಿಯಲ್ಲಿ ಸಂಕಟಕ್ಕೆ ಸಿಲುಕಿದ ಡೆಲ್ಲಿ

ಬುಧವಾರ, 28 ಅಕ್ಟೋಬರ್ 2020 (09:08 IST)
ದುಬೈ: ಐಪಿಎಲ್ 13 ರಲ್ಲಿ ಇನ್ನೇನು ಪ್ಲೇ ಆಫ್ ಹಂತಕ್ಕೆ ಹೋಗಿಯೇ ತೀರಿತು ಎನ್ನುವಾಗ ಸೋತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹಾದಿಗೆ ತಾನೇ ಕಲ್ಲು ಹಾಕಿಕೊಂಡಿದೆ.


ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ 88 ರನ್ ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ವೃದ್ಧಿಮಾನ್ ಸಹಾ 87 ರನ್ ಮತ್ತು ಡೇವಿಡ್ ವಾರ್ನರ್ 66 ರನ್ ಗಳ ನೆರವಿನಿಂದ ನಿಗದಿತ  20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 219 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಈ ಮೊತ್ತ ಬೆನ್ನತ್ತಿದ ಡೆಲ್ಲಿ 19 ಓವರ್ ಗಳಲ್ಲಿ 131 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಹೈದರಾಬಾದ್ ಮತ್ತೆ ಪ್ಲೇ ಆಫ್ ಪೈಪೋಟಿಗೆ ಬಂತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ