ರೋಹಿತ್ ಶರ್ಮಾಗೆ ಗಾಯವಾಗಿದ್ದು ನಿಜವೇ? ಟೀಂ ಇಂಡಿಯಾ ಆಯ್ಕೆಯಾಗದ ವಿವಾದ
ಸ್ನಾಯು ಸೆಳೆತಕ್ಕೊಳಗಾಗಿರುವ ರೋಹಿತ್ ಸದ್ಯಕ್ಕೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಗಾಯಗೊಂಡಿದ್ದರೂ ನವಂಬರ್ 3 ರವರೆಗೆ ತಂಡದ ಜತೆಗಿರಲಿದ್ದಾರೆ ಎನ್ನಲಾಗಿದೆ. ನೆಟ್ಸ್ ನಲ್ಲೂ ಅಭ್ಯಾಸ ಮಾಡುತ್ತಿದ್ದಾರೆ. ಹಾಗಿದ್ದರೆ ಅವರನ್ನು ಟೀಂ ಇಂಡಿಯಾದಿಂದ ಯಾಕೆ ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದು ಈಗ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.