ಅಮ್ಮನ ಅಡುಗೆ ನನ್ನ ಸಿಕ್ಸರ್ ಗಳ ಗುಟ್ಟು ಎಂದ ಮುಂಬೈ ಕ್ರಿಕೆಟಿಗ ಇಶಾನ್ ಕಿಶನ್
ಭಾನುವಾರ, 1 ನವೆಂಬರ್ 2020 (10:03 IST)
ದುಬೈ: ಐಪಿಎಲ್ 13 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿಯಲು ಮುಂಬೈ ಇಂಡಿಯನ್ಸ್ ಗೆ ಸಹಾಯ ಮಾಡಿದ ಯುವ ಕ್ರಿಕೆಟಿಗ ಇಶಾನ್ ಕಿಶನ್ ತನ್ನ ಈ ಹೊಡೆಬಡಿಯ ಹೊಡೆತಗಳಿಗೆ ಅಮ್ಮನ ಕೈಯಡುಗೆಯೇ ಕಾರಣ ಎಂದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 47 ಎಸೆತಗಳಲ್ಲಿ 72 ರನ್ ಚಚ್ಚಿದ ಇಶಾನ್ 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್ ಬಳಿಕ ಮಾತನಾಡಿರುವ ಅವರು ತಮ್ಮ ಫಿಟ್ನೆಸ್ ಕ್ರೆಡಿಟ್ ಅಮ್ಮನಿಗೆ ಸಲ್ಲಬೇಕು ಎಂದಿದ್ದಾರೆ. ಎಲ್ಲಾ ಕ್ರೆಡಿಟ್ ಅಮ್ಮನಿಗೆ ಸಲ್ಲಬೇಕು. ಅವಳ ಕೈ ಅಡುಗೆ ಕಾರಣ. ಭಾರೀ ಸಿಕ್ಸರ್ ಬಾರಿಸಲು ಎಲ್ಲಿಂದ ಶಕ್ತಿ ಬರುತ್ತದೆ ಎಂದು ನನಗೇ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಇದೆಲ್ಲವೂ ಅಭ್ಯಾಸ, ಕಠಿಣ ಪರಿಶ್ರಮದ ಫಲ ಎಂದಿದ್ದಾರೆ.