ಐಪಿಎಲ್ ಮಿಡ್ ಸೀಸನ್ ಟ್ರೇಡ್ ಎಂದರೆ ಏನು ಗೊತ್ತಾ?

ಬುಧವಾರ, 14 ಅಕ್ಟೋಬರ್ 2020 (09:19 IST)
ದುಬೈ: ಐಪಿಎಲ್ 13 ಆರಂಭವಾಗಿ ಮೂರು ವಾರವೇ ಕಳೆದಿದೆ. ಇದೀಗ ಹೆಚ್ಚು ಕಡಿಮೆ ಎಲ್ಲಾ ತಂಡಗಳು ಮಧ‍್ಯಾವದಿಗೆ ಬಂದು ನಿಂತಿದೆ. ಇದೀಗ ಫ್ರಾಂಚೈಸಿಗಳಿಗೆ ಮಿಡ್ ಸೀಸನ್ ಟ್ರೇಡ್  ಮಾಡುವ ಅವಕಾಶ ಸಿಗಲಿದೆ. ಅಷ್ಟಕ್ಕೂ ಮಿಡ್ ಸೀಸನ್ ಟ್ರೇಡ್ ಎಂದರೇನು ಗೊತ್ತಾ?


ಐಪಿಎಲ್ ನಲ್ಲಿ ಬಿಸಿಸಿಐ ನಿಯಮಗಳ ಪ್ರಕಾರ ಪ್ರತೀ ತಂಡವೂ ಏಳು ಪಂದ್ಯಗಳನ್ನು ಆಡಿದ ಮೇಲೆ ಮಧ್ಯಂತರವಾಗಿ ಬೇರೆ ತಂಡಗಳಿಂದ ಹೊಸ ಆಟಗಾರರನ್ನು ಖರೀದಿ ವಿನಿಮಯ ಮಾಡಿಕೊಳ್ಳಬಹುದು. ಇದೀಗ ಎಲ್ಲಾ ತಂಡಗಳೂ ಏಳು ಪಂದ್ಯಗಳನ್ನು ಆಡಿದ್ದು, ಇನ್ನು ಮಿಡ್ ಸೀಸನ್ ಟ್ರೇಡ್ ಮಾಡಿಕೊಳ್ಳಲು ಎಲ್ಲಾ ತಂಡಗಳಿಗೂ ಅವಕಾಶವಿದೆ. ಈ ಸಂದರ್ಭದಲ್ಲಿ ಆಟಗಾರರು ತಮಗೆ ಅಗತ್ಯವೆನಿಸದ ಆಟಗಾರರನ್ನು ಇನ್ನೊಂದು ತಂಡಕ್ಕೆ ನೀಡಿ ಆ ತಂಡದಿಂದ ತಮಗೆ ಅಗತ್ಯವಿರುವ ಆಟಗಾರನನ್ನು ಖರೀದಿ ಮಾಡಿಕೊಳ್ಳಬಹುದು. ಈಗಾಗಲೇ ತಮ್ಮ ತಂಡದಿಂದ ರಿಲೀಸ್ ಮಾಡಲು ಬಯಸುವ ಆಟಗಾರರನ್ನು ಆಯಾ ತಂಡಗಳು ಲಿಸ್ಟ್ ಮಾಡಿಕೊಂಡಿವೆ. ಇದರಿಂದ ಖರೀದಿ-ವಿನಿಮಯ ಪ್ರಕ್ರಿಯೆ ಸುಗಮವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ