ಐಪಿಎಲ್ 13: ಗೆಲುವಿನ ಹಳಿ ಮುಂದುವರಿಸುತ್ತಾ ಆರ್ ಸಿಬಿ

ಶನಿವಾರ, 3 ಅಕ್ಟೋಬರ್ 2020 (10:26 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ.


ಅಂಕಪಟ್ಟಿಯಲ್ಲಿ ಎರಡೂ ತಂಡಗಳು ಸಮೀಪದಲ್ಲೇ ಇವೆ. ಎರಡೂ ತಂಡಗಳು ಇದುವರೆಗೆ ತಲಾ ಎರಡು ಜಯ ಗಳಿಸಿ ಸಮಬಲರೆನಿಸಿದೆ. ಇತ್ತ ಆರ್ ಸಿಬಿ ಕಳೆದ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದ ಉತ್ಸಾಹದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಆರ್ ಸಿಬಿ ಈ ಪಂದ್ಯದಲ್ಲೂ ಅದನ್ನು ಮುಂದುವರಿಸಿದರೆ ರಾಜಸ್ಥಾನ್ ಬಲಾಢ್ಯ ಬ್ಯಾಟಿಂಗ್ ಕಟ್ಟಿಹಾಕಬಹುದಾಗಿದೆ. ಈ ಪಂದ್ಯದಲ್ಲಾದರೂ ಕೊಹ್ಲಿ ಫಾರ್ಮ್ ಗೆ ಮರಳಲಿ, ಎಬಿಡಿ ಜತೆ ಕೂಡಿಕೊಂಡು ಬ್ಯಾಟಿಂಗ್ ರಸದೌತಣ ನೀಡಲಿ ಎಂಬುದು ಅಭಿಮಾನಿಗಳ ಆಶಯ. ಪಂದ್ಯ ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ