ಈ ಕಾರಣಕ್ಕೆ ಧೋನಿ ಪತ್ನಿ ಸಾಕ್ಷಿಗೆ ಭಾರೀ ಬೇಸರವಾಗಿದೆಯಂತೆ!

ಶನಿವಾರ, 3 ಅಕ್ಟೋಬರ್ 2020 (09:20 IST)
ರಾಂಚಿ: ಪ್ರತೀ ಬಾರಿ ಐಪಿಎಲ್ ಕೂಟದ ವೇಳೆಗೆ ಆಟಗಾರರಷ್ಟೇ ಧೋನಿ ಪತ್ನಿ ಸಾಕ್ಷಿ, ಪುತ್ರಿ ಜೀವಾ ಕ್ಯಾಮರಾ ಕಣ್ಣಿನ ಗಮನ ಸೆಳೆಯುತ್ತಾರೆ. ಇಬ್ಬರೂ ಪ್ರತೀ ವರ್ಷವೂ ತಪ್ಪದೇ ಧೋನಿಗೆ ಚಿಯರ್ ಅಪ್ ಮಾಡಲು ಮೈದಾನದಲ್ಲಿರುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಸಾಕ್ಷಿ, ಜೀವಾ ಯುಎಇಗೆ ಧೋನಿ ಜತೆ ತೆರಳಲಿಲ್ಲ.


ಹೀಗಾಗಿ ಸಾಕ್ಷಿ ಧೋನಿಗೆ ಭಾರೀ ಬೇಸರವಾಗಿದೆಯಂತೆ. ‘ನಾನು ನನ್ನ ಗಂಡನನ್ನು, ಐಪಿಎಲ್ ನಲ್ಲಿ ಅವರಿಗೆ ಚಿಯರ್ ಅಪ್ ಮಾಡುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ. ಕೊರೋನಾ ಕಾರಣದಿಂದ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಸಿಎಸ್ ಕೆ ತಂಡದ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಗಳು ಕುಟುಂಬಸ್ಥರನ್ನು ಜತೆಗೆ ಕರೆದೊಯ್ದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ