ಐಪಿಎಲ್ 13 ಗೆದ್ದಿದ್ದು ಮುಂಬೈ ಇಂಡಿಯನ್ಸ್, ಹೀರೋ ಆಗಿದ್ದ ಸೌರವ್ ಗಂಗೂಲಿ!

ಬುಧವಾರ, 11 ನವೆಂಬರ್ 2020 (11:44 IST)
ದುಬೈ: ಐಪಿಎಲ್ 13 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮುಂಬೈ ಇಂಡಿಯನ್ಸ್ ತಂಡವಾದರೂ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆಗಿದ್ದಾರೆ.


ಈ ಕೊರೋನಾ ನಡುವೆಯೂ ಐಪಿಎಲ್ ಅಸಾಧ‍್ಯ ಎಂಬ ಪರಿಸ್ಥಿತಿಯಲ್ಲಿದ್ದಾಗ, ಯುಎಇನಲ್ಲಿ ಶ್ರೀಮಂತ ಕ್ರೀಡಾಕೂಟವನ್ನು ಆಯೋಜಿಸಲು ಗಂಗೂಲಿ ಶ್ರಮ ಅಪಾರ. ಹೀಗಾಗಿ ನೆಟ್ಟಿಗರು ಗಂಗೂಲಿಯನ್ನು ಕೊಂಡಾಡಿದ್ದಾರೆ. ನಿಮ್ಮಿಂದಲೇ ನಮಗೆ ಈ ಮನರಂಜನೆ ಸಿಕ್ಕಿತು ಎಂದು ಗಂಗೂಲಿ ಶ್ರಮವನ್ನು ಕೊಂಡಾಡಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿದಂತೆ ಹಲವರು ಗಂಗೂಲಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ