ಏನೇ ಹೇಳಿ ಆರ್ ಸಿಬಿ ಬಗ್ಗೆ ಸುನಿಲ್ ಗವಾಸ್ಕರ್ ನುಡಿದಿದ್ದ ಎರಡು ಭವಿಷ್ಯ ನಿಜವಾಗಿದೆ!

ಬುಧವಾರ, 14 ಅಕ್ಟೋಬರ್ 2020 (11:41 IST)
ದುಬೈ: ಐಪಿಎಲ್ 13 ರಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಟೀಕೆ ಮಾಡಿ ವಿವಾದಕ್ಕೀಡಾಗಿದ್ದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಟಕ್ಕೂ ಮೊದಲು ಹೇಳಿದ್ದ ಎರಡು ಭವಿಷ್ಯ ಮಾತ್ರ ಸುಳ್ಳಾಗಿಲ್ಲ.


ಈ ಐಪಿಎಲ್ ಕೂಟ ಆರಂಭಕ್ಕೂ ಮೊದಲು ಗವಾಸ್ಕರ್ ಸಂದರ್ಶನವೊಂದರಲ್ಲಿ ಯುಎಇ ಮೈದಾನದ ಪರಿಸ್ಥಿತಿ ನೋಡಿದರೆ ಇಲ್ಲಿ ಆರ್ ಸಿಬಿ ಮೇಲುಗೈ ಸಾಧಿಸಬಹುದು ಎಂದಿದ್ದರು. ಅದೀಗ ನಿಜವಾಗುತ್ತಿದೆ. ಇನ್ನೊಂದು ಈ ಬಾರಿ ಐಪಿಎಲ್ 13 ರಲ್ಲಿ ಆರ್ ಸಿಬಿಗೆ ಯಜುವೇಂದ್ರ ಚಾಹಲ್ ಮ್ಯಾಚ್ ವಿನ್ನರ್ ಆಗಬಹುದು. ಇಲ್ಲಿನ ಮೈದಾನಗಳು ನಿಧಾನಗತಿಯದ್ದಾಗಿದ್ದು, ಸ್ಪಿನ್ನರ್ ಗಳು ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಹೀಗಾಗಿ ಚಾಹಲ್ ಪಾತ್ರ ಪ್ರಮುಖವಾಗಲಿದೆ ಎಂದಿದ್ದರು. ಆರ್ ಸಿಬಿ ಬಗ್ಗೆ ಗವಾಸ್ಕರ್ ನುಡಿದಿದ್ದ ಈ ಎರಡೂ ಭವಿಷ್ಯಗಳು ನಿಜವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ