ಐಪಿಎಲ್ 13: ಆರ್ ಸಿಬಿ ವಿರುದ್ಧ ಪಂದ್ಯಕ್ಕೆ ಕ್ರಿಸ್ ಗೇಲ್ ಫಿಟ್?

ಬುಧವಾರ, 14 ಅಕ್ಟೋಬರ್ 2020 (11:18 IST)
ದುಬೈ: ಐಪಿಎಲ್ 13 ರಲ್ಲಿ ಇದುವರೆಗೆ ಒಂದೂ ಪಂದ್ಯವಾಡದ ಯೂನಿವರ್ಸ್ ಬಾಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ರಿಕೆಟಿಗ ಕ್ರಿಸ್ ಗೇಲ್ ನಾಳೆ ನಡೆಯಲಿರುವ ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಲಭ‍್ಯರಾಗುವ ಸಾಧ‍್ಯತೆಯಿದೆ.


ಕ್ರಿಸ್ ಗೇಲ್ ಫುಡ್ ಪಾಯ್ಸನ್ ಗೆ ತುತ್ತಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ಈಗ ಗೇಲ್ ಪುನರಾಗಮವನ್ನೇ ಎದಿರು ನೋಡುತ್ತಿದೆ. ಸದ್ಯಕ್ಕೆ ಅವರು ಚೇತರಿಸಿಕೊಂಡಿದ್ದು, ಮುಂದಿನ ಪಂದ್ಯದ ವೇಳೆಗೆ ಲಭ್ಯರಾಗುವ ನಿರೀಕ್ಷೆಯಿದೆ. ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಗೇಲ್ ಈ ತಂಡದ ಪರ ಸಾಕಷ್ಟು ದಾಖಲೆಗಳನ್ನು ಮಾಡಿ ತಮ್ಮದೇ ಅಭಿಮಾನಿ ವರ್ಗವನ್ನು ಹೊಂದಿದ್ದರು. ಇದೀಗ ಆರ್ ಸಿಬಿ ಪರವೇ ಕಣಕ್ಕಿಳಿಯುವ ಮೂಲಕ ಅವರು ಕಮ್ ಬ್ಯಾಕ್ ಮಾಡುತ್ತಿರುವುದು ವಿಶೇಷವೆನಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ