ಎಬಿಡಿ-ಕೊಹ್ಲಿ ಜೋಡಿಯ ಕುಚಿಕು ಕನ್ನಡ ಹಾಡು ಫುಲ್ ವೈರಲ್

ಬುಧವಾರ, 14 ಅಕ್ಟೋಬರ್ 2020 (10:30 IST)
ದುಬೈ: ಐಪಿಎಲ್ 13 ರಲ್ಲಿ ಕೋಲ್ಕೊತ್ತಾ ವಿರುದ್ಧ ಭರ್ಜರಿ ಶತಕದ ಜತೆಯಾಟವಾಡಿದ ಆರ್ ಸಿಬಿ ಜೋಡಿನೆತ್ತುಗಳಾದ ಎಬಿಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಕನ್ನಡದಲ್ಲಿರುವ ಕುಚಿಕು ಹಾಡೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಿಷ್ಣು-ಅಂಬಿ ಜೋಡಿಯ ದಿಗ್ಗಜರು ಸಿನಿಮಾದ ‘ಕುಚಿಕು ಕುಚಿಕು’ ಹಾಡು ಇಂದಿಗೂ ಸ್ನೇಹಿತರಿಗೆ ನ್ಯಾಷನಲ್ ಆಂಥಮ್ ಇದ್ದಂತೆ. ಈ ಹಾಡಿನ ದಾಟಿಯಲ್ಲೇ ಈಗ ಕೊಹ್ಲಿ-ಎಬಿಡಿ ಜೋಡಿಯನ್ನುದ್ದೇಶಿಸಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೊಸ ಸಾಲುಗಳೊಂದಿಗೆ ಟ್ವೀಟ್ ಮಾಡಿದೆ. ‘ನೆನಪೈತ ನಿಂಗೆ ಬೆಂಗ್ಳೂರ ಆಟ, ಮರೆತೋಯ್ತ ನಿಂಗೆ ಸಿಕ್ಸರ್ಸ ಊಟ.. ನೆನೆಸ್ಕೊಂಡ್ರೆ ಈಗ್ಲೂ, ಶಾರ್ಜಾ ತುಂಬಾ ಸಿಡ್ಲು, ಕುಚಿಕು, ಕುಚಿಕು, ಕುಚಿಕು’ ಎಂದು ಸಾಲುಗಳನ್ನು ಬರೆದು ಟ್ವೀಟ್ ಮಾಡಿರುವುದು ಕನ್ನಡಿಗರಿಗೆ ಭಾರೀ ಇಷ್ಟವಾಗಿದೆ. ಹಲವರು ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಈ ಕ್ರಿಯೇಟಿವ್ ಸಾಲುಗಳನ್ನು ಮೆಚ್ಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ