ಸೂರ್ಯಕುಮಾರ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಿದರಾ ಕೊಹ್ಲಿ?!

ಶುಕ್ರವಾರ, 30 ಅಕ್ಟೋಬರ್ 2020 (10:06 IST)
ದುಬೈ: ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ನಾಯಕ ಕೊಹ್ಲಿ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದುದು.
Photo Credit: PTI


ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ ಬಳಿಕ ಸೂರ್ಯಕುಮಾರ್ ಮೇಲಿನ ಅನುಕಂಪ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೂ ಮೊದಲು ಸೂರ್ಯ ಕೊಹ್ಲಿಯನ್ನು ಹೊಗಳಿ ಮಾಡಿದ್ದ ಟ್ವೀಟ್ ಗಳು ಈಗ ವೈರಲ್ ಆಗಿದೆ. ಇದರ ನಡುವೆಯೇ ಆಸ್ಟ್ರೇಲಿಯಾ ಪ್ರವಾಸಕ್ಕೆ ಅವರನ್ನು ಅವಗಣಿಸಿದ್ದು ಭಾರೀ ಸುದ್ದಿಯಾಗಿತ್ತು. ಅದಾದ ಬೆನ್ನಲ್ಲೇ ಕೊಹ್ಲಿ ಸ್ಲೆಡ್ಜಿಂಗ್ ಮಾಡಿರುವುದು ನೋಡಿ ನೆಟ್ಟಿಗರು ಕೊಹ್ಲಿ ಬೇಕೆಂದೇ ಯುವ ಬ್ಯಾಟ್ಸ್ ಮನ್ ನ್ನು ಟಾರ್ಗೆಟ್ ಮಾಡಿದರೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮ್ಮನ್ನೇ ರೋಲ್ ಮಾಡೆಲ್ ಎಂದುಕೊಂಡಿರುವ ಯುವ ಬ್ಯಾಟ್ಸ್ ಮನ್ ಗೆ ಕೊಹ್ಲಿ ಹೀಗೆ ಮಾಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ