ಐಪಿಎಲ್ ಆಡಲಿರುವ ಆಸೀಸ್ ಆಟಗಾರರಿಗೆ ಷರತ್ತು ವಿಧಿಸಿದ ಕ್ರಿಕೆಟ್ ಮಂಡಳಿ

ಶುಕ್ರವಾರ, 16 ನವೆಂಬರ್ 2018 (08:48 IST)
ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಆಡಬೇಕಾದರೆ ಆಸ್ಟ್ರೇಲಿಯಾ ಕ್ರಿಕೆಟಿಗರು ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕು ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಎಚ್ಚರಿಸಿದೆ.

ಐಪಿಎಲ್ ಬಳಿಕ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಕೂಟ ನಡೆಯಲಿರುವುದರಿಂದ ಈ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಕ್ರಿಕೆಟಿಗರಿಗೆ ಖಡಾಖಂಡಿತವಾಗಿ ಕೆಲವು ನಿಯಮ ರೂಪಿಸಿದೆ. ಹೀಗಾಗಿ ಪ್ರಮುಖ ಆಟಗಾರರು, ಐಪಿಎಲ್ ನ ಪ್ರಮುಖ ಪಂದ್ಯಗಳನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ.

ಐಪಿಎಲ್ ಆಡುವ ಮೊದಲು ಕ್ರಿಕೆಟಿಗರು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ನಿರಾಪೇಕ್ಷಣಾ ಪತ್ರ ಪಡೆದಿರಬೇಕು. ಐಪಿಎಲ್ ಆಡಲು ಪಾಕಿಸ್ತಾನದ ವಿರುದ್ಧ ನಡೆಯಲಿರುವ ಏಕದಿನ ಸರಣಿ ಸೇರಿದಂತೆ ದೇಶದ ಪರವಾಗಿ ಆಡಲಿರುವ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ವಿಶ್ವಕಪ್ ಗೆ ಸಜ್ಜಾಗುವ ನಿಟ್ಟಿನಲ್ಲಿ ಮೇ ಆರಂಭದಲ್ಲೇ ಕ್ರಿಕೆಟಿಗರು ಅಭ್ಯಾಸ ಶಿಬಿರಕ್ಕೆ ಹಾಜರಾಗಬೇಕು ಎಂದು ಕ್ರಿಕೆಟ್ ಮಂಡಳಿ ಷರತ್ತು ವಿಧಿಸಿದೆ. ಇದರಿಂದಾಗಿ ಈ ಬಾರಿಯ ಐಪಿಎಲ್ ಗೆ ಆಸೀಸ್ ಆಟಗಾರರು ಗೈರು ಹಾಜರಾಗುವ ಸಾಧ್ಯತೆಯೇ ಹೆಚ್ಚು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ