ರಣಜಿ ಟ್ರೋಫಿ: ಮೊದಲ ಪಂದ್ಯವನ್ನೇ ಡ್ರಾ ಮಾಡಿಕೊಂಡ ಕರ್ನಾಟಕ
ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಆದರೆ ಒಟ್ಟಾರೆ 147 ರನ್ ಗಳ ಮುನ್ನಡೆ ಪಡೆದಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ ಪರ ಆರಂಭಿಕ ರವಿಕಾಂತ್ ಸಮರ್ಥ್ 30 ರನ್ ಮತ್ತು ಕೆ ಸಿದ್ಧಾರ್ಥ್ 16 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿಯನ್ನೂ ದಾಟಲಿಲ್ಲ. ವಿದರ್ಭ ಪರ ಆದಿತ್ಯ ಸರ್ವಾಟೆ ಮಾರಕ ದಾಳಿ ಸಂಘಟಿಸಿ 4 ವಿಕೆಟ್ ಕಿತ್ತರು.
ನಿನ್ನೆ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದ ವಿದರ್ಭ ಇಂದು 228 ರನ್ ಗಳಿಗೆ ಆಲೌಟ್ ಆಗಿತ್ತು. ಕರ್ನಾಟಕ ಪರ ಜಗದೀಶ್ ಸುಚಿತ್ 5 ವಿಕೆಟ್ ಗೊಂಚಲು ಪಡೆದರೆ ಪ್ರಸೀದ್ ಕೃಷ್ಣ 3 ವಿಕೆಟ್ ಕಿತ್ತು ಮಿಂಚಿದರು.