ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೇ ಇದೀಗ ವಿದೇಶೀ ಆಟಗಾರರು ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ನಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದಾರೆ.
ಚೆನ್ನೈ ತಂಡ ಕೂಡಿಕೊಳ್ಳಬೇಕಿದ್ದ ಆಸೀಸ್ ನ ಜೋಶ್ ಹೇಝಲ್ ವುಡ್ ಚೆನ್ನೈ ತಂಡ ಕೂಡಿಕೊಳ್ಳುವುದು ಹೇಗೆ ಎಂಬ ಆತಂಕ ಕಾಡುತ್ತಿದೆಎಂದಿದ್ದಾರೆ. ಇತರ ಆಸ್ಟ್ರೇಲಿಯಾ ಮೂಲದ ಆಟಗಾರರೂ ಕೊರೋನಾ ಬಗ್ಗೆ ಆತಂಕ ಹೊಂದಿದ್ದಾರೆ. ಕೆಲವು ದಿನ ಕಳೆದ ಬಳಿಕ ತಂಡವನ್ನು ಅನಿವಾರ್ಯವಾಗಿ ಕೂಡಿಕೊಳ್ಳಬೆಕಿದ್ದು ಆ ವೇಳೆ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂಬ ವಿಶ್ವಾಸದಲ್ಲಿ ಹೇಝಲ್ ವುಡ್ ಇದ್ದಾರೆ.