ಕೊರೋನಾ ಬಗ್ಗೆ ಭಯ ಬೇಡ: ಐಪಿಎಲ್ ಕ್ರಿಕೆಟಿಗರಿಗೆ ಬಿಸಿಸಿಐ ಅಭಯ

ಸೋಮವಾರ, 5 ಏಪ್ರಿಲ್ 2021 (09:15 IST)
ಮುಂಬೈ: ಐಪಿಎಲ್ 14 ಕ್ಕೆ ಜೈವ ಸುರಕ್ಷಾ ವಲಯಕ್ಕೆ ಎಂಟ್ರಿ ಕೊಟ್ಟ ಮೇಲೂ ಕ್ರಿಕೆಟಿಗರಲ್ಲಿ, ಸಹಾಯಕ ಸಿಬ್ಬಂದಿಯಲ್ಲಿ ಕೊರೋನಾ ಪ್ರಕರಣ ಕಾಣಿಸುತ್ತಿದೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.
 


ದೇಶದಲ್ಲಿ ಕೊರೋನಾ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗಿದ್ದರೂ ಐಪಿಎಲ್ ಬಗ್ಗೆ ಭಯ ಬೇಡ. ಇದನ್ನು ತಕ್ಕ ಸುರಕ್ಷತಾ ಕ್ರಮಗಳೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೂಟ ರದ್ದಾಗುವ ಭೀತಿ ಬೇಡ. ಅದು ನಿಗದಿಯಂತೇ ನಡೆಯಲಿದೆ. ಆಟಗಾರರ ಸಂಖ್ಯೆ ಹೆಚ್ಚಿಸಲಾಗಿದೆ. ಹೀಗಾಗಿ ಟೂರ್ನಮೆಂಟ್ ನಡೆಯಲಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ. ಆದರೆ ಪ್ರಮುಖ ಆಟಗಾರರೇ ಕೊರೋನಾ ಸೋಂಕಿತರಾದರೆ ತಂಡಕ್ಕೆ ಸಂಕಷ್ಟ ಎದುರಾಗಲಿದೆ ಎನ್ನುವುದು ಸತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ