ಐಪಿಎಲ್ 14 ಭಾರತದಿಂದ ಶಿಫ್ಟ್ ಮಾಡುವ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಭಾನುವಾರ, 4 ಏಪ್ರಿಲ್ 2021 (09:28 IST)
ಮುಂಬೈ: ಐಪಿಎಲ್ 14 ನೇ ಆವೃತ್ತಿ ಭಾರತದಲ್ಲೇ ನಡೆಸುವುದಾಗಿ ಬಿಸಿಸಿಐಯೇನೋ ಘೋಷಣೆ ಮಾಡಿಕೊಂಡು ಸಿದ್ಧತೆಯನ್ನೂ ನಡೆಸಿದೆ. ಆದರೆ ಈಗ ಕೊರೋನಾ ಭೀತಿ ಆವರಿಸಿದೆ.


ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾ, ಡೆಲ್ಲಿ ತಂಡದ ಅಕ್ಸರ್ ಪಟೇಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾಫ್,  ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ಕೊರೋನಾ ತಗುಲಿದ ಬಳಿಕ ಬಿಸಿಸಿಐ ಐಪಿಎಲ್ ನ್ನು ಮುಂಬೈಯಿಂದ ಸ್ಥಳಾಂತರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದೆ.

‘ಇದೀಗ ತುಂಬಾ ತಡವಾಗಿದೆ. ಸಿಬ್ಬಂದಿಗಳು, ಕ್ರಿಕೆಟಿಗರು ಪ್ರತ್ಯೇಕ ಪ್ರತ್ಯೇಕವಾಗಿ ಬಯೋ ಬಬಲ್‍ ವಾತಾವರಣದಲ್ಲಿದ್ದಾರೆ. ಬಿಸಿಸಿಐ ಬಳಿಕ ಹೈದರಾಬಾದ್ ಇನ್ನೊಂದು ಆಯ್ಕೆಯಾಗಿ ಇದೆ. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವನ್ನೂ ಹೈದರಾಬಾದ್ ಗೆ ಶಿಫ್ಟ್ ಮಾಡುವುದು ಸುಲಭವಲ್ಲ’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ