ಐಪಿಎಲ್ ನಡೆಸಲು ಪ್ಲ್ಯಾನ್ ಬಿ ರೆಡಿ ಮಾಡಿಕೊಂಡ ಬಿಸಿಸಿಐ

ಬುಧವಾರ, 18 ಮಾರ್ಚ್ 2020 (10:13 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಬೇಕಿದ್ದ ಐಪಿಎಲ್ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಐಪಿಎಲ್ ನಡೆಸುವ ಬಗ್ಗೆ ಬಿಸಿಸಿಐ ಮತ್ತೊಂದು ಯೋಜನೆ ರೂಪಿಸಿದೆ.


ಸದ್ಯಕ್ಕಂತೂ ಐಪಿಎಲ್ ನಡೆಸಲು ಸಾಧ್ಯವಿಲ್ಲ. ಹೀಗಾಗಿ ತಡವಾದಷ್ಟು ಐಪಿಎಲ್ ವೇಳಾಪಟ್ಟಿಗೆ ಸಮಯ ಹೊಂದಿಸಲು ಕಷ್ಟವಾಗಬಹುದು. ಇದಕ್ಕಾಗಿ ಬಿಸಿಸಿಐ ಮತ್ತೊಂದು ಯೋಜನೆ ಸಿದ್ಧಪಡಿಸಿದೆ.

ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಈಗಿನ ವೇಳಾಪಟ್ಟಿಯಲ್ಲಿರುವಷ್ಟು ಪಂದ್ಯ ನಡೆಸಲು ಕಷ್ಟವಾದರೂ ಈ ವರ್ಷದ ಐಪಿಎಲ್ ಕೂಟ ನಡೆಸಿ ನಷ್ಟವಾಗದಂತೆ ನೋಡಿಕೊಳ್ಳುವ ಯೋಜನೆ ಬಿಸಿಸಿಐಯದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ