ವಿದೇಶೀ ಆಟಗಾರರು ಇಲ್ಲದೇ ಇದ್ದರೂ ಓಕೆ ಎಂದ ಐಪಿಎಲ್ ಫ್ರಾಂಚೈಸಿಗಳು

ಬುಧವಾರ, 18 ಮಾರ್ಚ್ 2020 (09:35 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಐಪಿಎಲ್ ನ ಈ ವರ್ಷದ ಆವೃತ್ತಿ ಅನಿಶ್ಚಿತತೆಯಲ್ಲಿದೆ. ಹೀಗಿರುವಾಗ ಐಪಿಎಲ್ ನಡೆಯದೇ ಇದ್ದರೆ ಸಾವಿರಾರು ಕೋಟಿ ರೂ. ನಷ್ಟ ತಡೆಯಲು ಫ್ರಾಂಚೈಸಿಗಳು ತೀರ್ಮಾನವೊಂದಕ್ಕೆ ಬಂದಿದ್ದಾರೆ.


ವಿದೇಶೀ ಆಟಗಾರರನ್ನೂ ಕರೆಸದೇ ಐಪಿಎಲ್ ನಡೆಸುವುದಾದರೂ ಸರಿಯೇ. ಐಪಿಎಲ್ ರದ್ದು ಮಾಡುವುದು ಬೇಡ ಎಂದು ಫ್ರಾಂಚೈಸಿಗಳು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸರ್ಕಾರ ವಿದೇಶೀಯರಿಗೆ ಭಾರತಕ್ಕೆ ಬರಲು ನಿರ್ಬಂಧ ವಿಧಿಸಿದೆ. ಹೀಗಾಗಿ ಐಪಿಎಲ್ ನಡೆಸಿದರೂ ವಿದೇಶೀ ಆಟಗಾರರು ಭಾರತಕ್ಕೆ ಬರಲು ಕಷ್ಟ. ಹಾಗೊಂದು ವೇಳೆ ಆದರೆ ವಿದೇಶೀ ಆಟಗಾರರನ್ನು ಹೊರಗಿಟ್ಟಾದರೂ ಐಪಿಎಲ್ ನಡೆಸಲಿ ಎಂಬುದು ಫ್ರಾಂಚೈಸಿಗಳ ವಾದ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ