ಕೊರೋನಾ ಭೀತಿಗೆ ಬಿಸಿಸಿಐ ಕಚೇರಿಯೇ ಬಂದ್!

ಮಂಗಳವಾರ, 17 ಮಾರ್ಚ್ 2020 (10:53 IST)
ಮುಂಬೈ: ದೇಶದಾದ್ಯಂತ ಕೊರೋನಾವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ರದ್ದುಗೊಳಿಸಿರುವ ಬಿಸಿಸಿಐ ಈಗ ತನ್ನ ಕಚೇರಿಗೂ ಬೀಗ ಹಾಕಿದೆ.


ಮುಂಬೈನಲ್ಲಿರುವ ಬಿಸಿಸಿಐ ಕಚೇರಿ ಬಂದ್ ಆಗಿದ್ದು, ಎಲ್ಲಾ ಅಧಿಕಾರಿಗಳಿಗೂ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಈ ರೀತಿ ಮಾಡಲಾಗಿದೆ.

ವಾಂಖೆಡೆ ಮೈದಾನಕ್ಕೆ ಬೀಗ ಜಡಿಯಲಾಗಿದ್ದು, ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಮನೆಯಲ್ಲೇ ಕೆಲಸ ಮಾಡುವಂತೆ ನೋಟಿಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ