ಐಪಿಎಲ್ ಹರಾಜಿಗಿದ್ದಾರೆ ಖ್ಯಾತ ಆಟಗಾರರು

ಮಂಗಳವಾರ, 20 ಡಿಸೆಂಬರ್ 2016 (11:29 IST)
ನವದೆಹಲಿ: ಕೆವಿನ್ ಪೀಟರ್ಸನ್, ಡೇಲ್ ಸ್ಟೈನ್, ಇಮ್ರಾನ್ ತಾಹಿರ್ ರಂತಹ ಖ್ಯಾತ ವಿದೇಶೀ ಆಟಗಾರರನ್ನು ಅವರವರ ತಂಡದಿಂದ ಕೈ ಬಿಡಲಾಗಿದ್ದು, ಹೊಸದಾಗಿ ಹರಾಜು ಪ್ರಕ್ರಿಯೆಗೊಳಗಾಗಲಿದ್ದಾರೆ. ಆದರೆ ಭಾರತದ ಯುವರಾಜ್ ಸಿಂಗ್ ರನ್ನು ಮಾತ್ರ ಹೈದರಾಬಾದ್ ತಂಡ ತನ್ನಲ್ಲೇ ಉಳಿಸಿಕೊಂಡಿದೆ.

2017 ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಒಟ್ಟು 63 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ. 140 ಆಟಗಾರರನ್ನು ಆಯಾಯಾ ಫ್ರಾಂಚೈಸಿಗಳು ತನ್ನಲ್ಲೇ ಉಳಿಸಿಕೊಂಡಿವೆ. ಕಳೆದ ವರ್ಷ 3.5 ಕೋಟಿ ರೂ. ಗೆ ಪುಣೆ ತಂಡಕ್ಕೆ ಆಯ್ಕೆಯಾದ ಪೀಟರ್ಸನ್ ಕೇವಲ ನಾಲ್ಕು ಪಂದ್ಯ ಆಡಿದ್ದರಷ್ಟೆ. ಹೀಗಾಗಿ ಈ ಬಾರಿ ಪುಣೆ ಇಂಗ್ಲೆಂಡ್ ಆಟಗಾರನಿಗೆ ಕೊಕ್ ನೀಡಿದೆ.

ದುಬಾರಿ 6.5 ಕೋಟಿ ರೂ. ಮೊತ್ತಕ್ಕೆ ಕಳೆದ ವರ್ಷ ಪಂಜಾಬ್ ತಂಡಕ್ಕೆ ಹರಾಜಾಗಿದ್ದ ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್, ಗಾಯಗೊಂಡಿರುವ ಡೇಲ್ ಸ್ಟೈನ್ ಗುಜರಾತ್ ಲಯನ್ಸ್ ತಂಡದಿಂದ ಕೈ ಬಿಡಲಾಗಿದೆ.

ಆದರೆ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಎಬಿಡಿ ವಿಲಿಯರ್ಸ್ ಅವರನ್ನು ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ಉಳಿಸಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ