ಐಪಿಎಲ್ ಗೆ ಮುನ್ನ ಬಿಗ್ ಶಾಕ್: ಸಿಎಸ್ ಕೆ ತಂಡದ 13 ಮಂದಿಗೆ ಕೊರೋನಾ ಸೋಂಕು
ಶನಿವಾರ, 29 ಆಗಸ್ಟ್ 2020 (09:12 IST)
ದುಬೈ: ಐಪಿಎಲ್ 13 ಆಡಲು ದುಬೈಗೆ ಬಂದಿಳಿದಿರುವ ಸಿಎಸ್ ಕೆ ತಂಡದ ಒಬ್ಬ ಕ್ರಿಕೆಟಿಗ ಹಾಗೂ 12 ಸಹಾಯಕ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕಳೆದ ವಾರ ದುಬೈಗೆ ಬಂದಿಳಿದಿದ್ದ ಸಿಎಸ್ ಕೆ ತಂಡ ನೆಟ್ ಪ್ರಾಕ್ಟೀಸ್ ಗೆ ಮೊದಲು ಕೊರೋನಾ ಪರೀಕ್ಷೆಗೊಳಗಾಗಿತ್ತು. ಈ ಪರೀಕ್ಷೆಯಲ್ಲಿ 13 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಫ್ರಾಂಚೈಸಿಗಳಿಗೆ ಬಿಗ್ ಶಾಕ್ ಆಗಿದೆ. ಕೊರೋನಾ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡರೂ ಸೋಂಕು ತಗುಲಿರುವುದು ಕ್ರಿಕೆಟಿಗರಲ್ಲಿ ಭೀತಿ ಆವರಿಸಿದೆ.
ಈ ಬಗ್ಗೆ ಚೆನ್ನೈ ತಂಡ ಅಧಿಕೃತ ಹೇಳಿಕೆ ನೀಡದಿದ್ದರೂ ಚೆನ್ನೈನಲ್ಲಿ ಕ್ಯಾಂಪ್ ನಡೆಸಿದ್ದ ವೇಳೆ ಇಷ್ಟು ಮಂದಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೀಗ ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ.