ರೈನಾರನ್ನು ಏಕೆ ಖರೀದಿಸಲಿಲ್ಲ? ಕಾರಣ ನೀಡಿದ ಸಿಎಸ್ ಕೆ
ರೈನಾ ಈ ಮೊದಲು ಚೆನ್ನೈ ಪರ ಆಡಿದ್ದರು. ಆದರೆ ಈ ಬಾರಿ ಹರಾಜಿನ ರೇಸ್ ನಲ್ಲಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿ ಮಾಡಲಿಲ್ಲ. ಕೊನೆಗೆ ಸಿಎಸ್ ಕೆ ಬಳಿ ಹಣವಿದ್ದರೂ ರೈನಾರನ್ನು ಖರೀದಿ ಮಾಡಲಿಲ್ಲ. ಇದರಿಂದ ನೆಟ್ಟಿಗರು ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಮಧ್ಯೆ ಸಿಎಸ್ ಕೆ ಸ್ಪಷ್ಟನೆ ನೀಡಿದ್ದು, ರೈನಾ ಇದುವರೆಗೆ ನಮ್ಮ ಯಶಸ್ವಿ ಆಟಗಾರ. ಅವರನ್ನು ಖರೀದಿಸದೇ ಇರುವ ನಿರ್ಧಾರ ಕಠಿಣವಾದುದು. ಮೆಗಾ ಹರಾಜಿನ ವೇಳೆ ನಮ್ಮ ತಂಡದ ಸಂಯೋಜನೆ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಿದ್ದೆವು. ಆ ಸಂಯೋಜನೆಗೆ ರೈನಾ ಹೊಂದಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರನ್ನು ಖರೀದಿಸಿಲ್ಲ ಎಂದು ಸಿಎಸ್ ಕೆ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.