ಐಪಿಎಲ್ 14: ಸೂಪರ್ ಓವರ್ ನಲ್ಲಿ ಗೆದ್ದ ಡೆಲ್ಲಿ

ಸೋಮವಾರ, 26 ಏಪ್ರಿಲ್ 2021 (09:06 IST)
ಅಹಮ್ಮದಾಬಾದ್: ಐಪಿಎಲ್ 14 ರ ಡೆಲ್ಲಿ ಕ್ಯಾಪಿಟಲ್ಸ್-ಸನ್ ರೈಸರ್ಸ್ ನಡುವಿನ ಪಂದ್ಯ ರೋಚಕವಾಗಿ ಸೂಪರ್ ಓವರ್ ನಲ್ಲಿ ಅಂತ್ಯಗೊಂಡಿದೆ. ಸೂಪರ್ ಓವರ್ ನಲ್ಲಿ ಡೆಲ್ಲಿ ಪಂದ್ಯ ತನ್ನದಾಗಿಸಿಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಪೃಥ‍್ವಿ ಶಾ 53, ರಿಷಬ್ ಪಂತ್ 37 ಮತ್ತು ಸ್ಟೀವ್ ಸ್ಮಿತ್ 34 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕೂಡಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಇದರೊಂದಿಗೆ ಪಂದ್ಯ ಟೈ ಆಯಿತು.

ಈ ವೇಳೆ ಸೂಪರ್ ಓವರ್ ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 8 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಹೈದರಾಬಾದ್ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಡೆಲ್ಲಿಗೆ ರೋಚಕ ಗೆಲುವು ಪ್ರಾಪ್ತಿಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ