ಕೊರೋನಾ ಗೆದ್ದ ಧೋನಿ ತಂದೆ-ತಾಯಿ
ಏಪ್ರಿಲ್ 20 ರಂದು ಇಬ್ಬರನ್ನೂ ರಾಂಚಿಯ ಪುಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ಆರೋಗ್ಯವೂ ಸ್ಥಿರವಾಗಿತ್ತು. ಇದೀಗ ಡಿಸ್ಚಾರ್ಜ್ ಆದ ಬಳಿಕ ಧೋನಿ ತಂದೆ ಪಾನ್ ಸಿಂಗ್ ರನ್ನು ವೀಲ್ ಚೇರ್ ಮೂಲಕ ಹೊರಗೆ ಕರೆದೊಯ್ಯಲಾಗಿದೆ. ಇಬ್ಬರೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.