ಕೆಕೆಆರ್ ಗೆಲ್ಲಬೇಕಿತ್ತು! ಐಪಿಎಲ್ ಗೆಲುವಿನ ಬಳಿಕ ಧೋನಿ ಹೀಗೆ ಹೇಳಿದ್ದೇಕೆ?!

ಶನಿವಾರ, 16 ಅಕ್ಟೋಬರ್ 2021 (09:40 IST)
ದುಬೈ: ಐಪಿಎಲ್ 14 ರ ಫೈನಲ್ ನಲ್ಲಿ ಗೆದ್ದು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಎದುರಾಳಿ ತಂಡವನ್ನು ಹೊಗಳಿದ್ದಾರೆ.


ನಿನ್ನೆ ಫೈನಲ್ ಪಂದ್ಯ ಗೆದ್ದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಧೋನಿ ತಮ್ಮ ತಂಡದ ಸಾಧನೆ ಬಗ್ಗೆ ಮಾತನಾಡುವ ಮೊದಲು ಕೆಕೆಆರ್ ಈ ಕೂಟದಲ್ಲಿ ನಡೆದು ಬಂದ ಹಾದಿ ಬಗ್ಗೆ ಪ್ರಶಂಶಿಸಿದರು.

‘ಸಿಎಸ್‍ ಕೆ ಬಗ್ಗೆ ಮಾತನಾಡುವ ಮೊದಲು ನಾನು ಕೆಕೆಆರ್ ಬಗ್ಗೆ ಮಾತನಾಡಬೇಕು. ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿ ಬಳಿಕ ಮೇಲದ್ದು, ಫೈನಲ್ ವರೆಗೆ ಹೋರಾಡಿದ ಕೆಕೆಆರ್ ಸಾಧನೆ ಸಾಧಾರಣದ್ದಲ್ಲ. ಒಂದು ವೇಳೆ ಈ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲುವ ಅರ್ಹ ತಂಡ ಎಂದು ಯಾವುದಾದರೂ ಇದ್ದಿದ್ದರೆ ಅದು ಕೆಕೆಆರ್’ ಎಂದು ಧೋನಿ ಎದುರಾಳಿಯನ್ನು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ