ಐಪಿಎಲ್ 14 ಕ್ಕೆ ಚೆನ್ನೈ ಕಿಂಗ್
ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಕೋಲ್ಕೊತ್ತಾಗೆ ಆರಂಭಿಕರು ಭರ್ಜರಿ ಆರಂಭ ಒದಗಿಸಿದರು. ಶುಬ್ನಂ ಗಿಲ್ 51, ವೆಂಕಟೇಶ್ ಐಯರ್ 50 ರನ್ ಗಳಿಸಿದರು. ಆದರೆ ಇವರಿಬ್ಬರನ್ನು ದೀಪಕ್ ಚಹರ್ ಮತ್ತು ಶ್ರಾದ್ಧೂಲ್ ಔಟ್ ಮಾಡುವುದರೊಂದಿಗೆ ಕೆಕೆಆರ್ ಕುಸಿತಕ್ಕೆ ನಾಂದಿಯಾಯಿತು. ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕೆಕೆಆರ್ ಗೆ ಕೈ ಕೊಟ್ಟರು. ಕೆಳ ಕ್ರಮಾಂಕದಲ್ಲಿ ಫರ್ಗ್ಯುಸನ್ 18, ಶಿವಂ ಮಾವಿ 20 ರನ್ ಗಳಿಸಿದರು. ಇದರಿಂದಾಗಿ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.