ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಈ ಎರಡು ಕಂಪನಿಗಳ ನಡುವೆ ಪೈಪೋಟಿ

ಭಾನುವಾರ, 16 ಆಗಸ್ಟ್ 2020 (11:22 IST)
ಮುಂಬೈ: ಐಪಿಎಲ್ 13 ರ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿತ್ತು. ಅದರಂತೆ ಹಲವು ಕಂಪನಿಗಳು ಬಿಡ್ ಸಲ್ಲಿಸಿದ್ದವು.


ಆ ಪೈಕಿ ಈಗ ಟಾಟಾ ಗ್ರೂಪ್ ಮತ್ತು ಅನ್ ಅಕಾಡೆಮಿ ಕಂಪನಿ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿದೆ. ಈ ಎರಡೂ ಕಂಪನಿಗಳು ಸಂಪೂರ್ಣವಾಗಿ ಭಾರತೀಯ ಮೂಲದ್ದಾಗಿದೆ.

ಹೀಗಾಗಿ ಬಿಸಿಸಿಐ ಕೂಡಾ ಈ ಎರಡು ಕಂಪನಿಗಳಲ್ಲಿ ಒಂದನ್ನು ಟೈಟಲ್ ಪ್ರಾಯೋಜಕರಾಗಿ ಆಯ್ಕೆ ಮಾಡಲು ಬಯಸಿದೆ. ಅಂತಿಮವಾಗಿ ಯಾರು ಬಿಡ್ ನಲ್ಲಿ ಮೇಲುಗೈ ಸಾಧಿಸುತ್ತಾರೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ