ವಿರಾಟ್ , ಡಿವಿಲಿಯರ್ಸ್‌ರನ್ನು ಔಟ್ ಮಾಡುವುದು ಕಠಿಣ ಕೆಲಸ: ಭುವಿ

ಶನಿವಾರ, 28 ಮೇ 2016 (15:42 IST)
ಈ ವರ್ಷದ ಐಪಿಎಲ್ ಸೀಸನ್‌ನಲ್ಲಿ ಸನ್ ರೈಸರ್ಸ್ ಪೇಸ್ ದಾಳಿ ಅತ್ಯಂತ ಭಯಾನಕವಾಗಿದೆ. ಆದರೂ ಕೂಡ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಭುವನೇಶ್ವರ್ ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವುದು ಕಠಿಣ ಕೆಲಸ ಎಂದು ಉದ್ಗರಿಸಿದ್ದಾರೆ.
 
ನಾವು ಖಂಡಿತವಾಗಿ ವ್ಯೂಹಾತ್ಮಕವಾಗಿ ಆಡುತ್ತೇವೆ. ವಿರಾಟ್ ಕೊಹ್ಲಿ ಆರ್‌ಸಿಬಿ ರನ್‌ಗಳಲ್ಲಿ ಶೇ. 35ರಷ್ಟು ಸ್ಕೋರ್ ಮಾಡಿದ್ದನ್ನು ನಾನು ಓದಿದ್ದೆ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಮತ್ತು ಡಿ ವಿಲಿಯರ್ಸ್ ಅವರನ್ನು ಔಟ್ ಮಾಡುವುದು ಸಾಹಸದ ಕೆಲಸ ಎಂದು ಬುವನೇಶ್ವರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈಗ ನಾವು ಸಂತೋಷದಿಂದ ಕಾಲಕಳೆಯುತ್ತೇವೆ. ಏಕೆಂದರೆ ಫೈನಲ್‌ನಲ್ಲಿ ಒತ್ತಡದಿಂದ ಆಡಬೇಕಾಗಿದೆ ಎಂದು ಭುವನೇಶ್ವರ್ ಪ್ರತಿಕ್ರಿಯಿಸಿದರು.

 ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ