ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡವೆಂದರೆ ನೆನಪಿಗೆ ಬರುವುದು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕನ ಹೆಸರು. ಆಸ್ಟ್ರೇಲಿಯಾದ ಈ ಕ್ರಿಕೆಟ್ ದಿಗ್ಗಜ ಮತ್ತೆ ಐಪಿಎಲ್ ಗೆ ಬರುತ್ತಿರುವುದಾಗಿ ಘೋಷಿಸಿದ್ದಾರೆ.
ರಾಜಸ್ಥಾನ್ ತಂಡದ ನಾಯಕನಾಗಿ, ಕೋಚ್ ಆಗಿ ಭಾರೀ ಯಶಸ್ಸು ತಂದುಕೊಟ್ಟಿದ್ದ ಶೇನ್ ವಾರ್ನ್ ಭಾರತದಲ್ಲೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಸದ್ಯದಲ್ಲೇ ಅಧಿಕೃತವಾಗಿ ತನ್ನ ಐಪಿಎಲ್ ಪ್ರವೇಶದ ಬಗ್ಗೆ ಘೋಷಣೆ ಮಾಡುವುದಾಗಿ ವಾರ್ನ್ ಹೇಳಿದ್ದಾರೆ.
ಅವರು ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ, ಅವರ ಪಾತ್ರವೇನು ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಅಭಿಮಾನಿಗಳೂ ಇದನ್ನೇ ಎದುರು ನೋಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ