ಐಪಿಎಲ್ 13 ಕದನ ಕಣದಲ್ಲಿ ಮುಂಬೈ v/s ಚೆನ್ನೈ: ಉಭಯ ತಂಡಗಳ ಮ್ಯಾಚ್ ವಿನ್ನರ್ ಯಾರು?
ಮುಂಬೈ ಇಂಡಿಯನ್ಸ್ ಗೆ ನಾಯಕ ರೋಹಿತ್ ಶರ್ಮಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡಾ ನಿರ್ಣಾಯಕರಾಗಬಲ್ಲರು. ಜಸ್ಪ್ರೀತ್ ಬುಮ್ರಾ ಒಳಗೊಂಡ ವೇಗದ ಬೌಲಿಂಗ್ ಪಡೆ ಕೂಡಾ ಪ್ರಬಲವಾಗಿದೆ. ಆದರೆ ಅತ್ತ ಚೆನ್ನೈ ಕೂಡಾ ಸಾಮಾನ್ಯ ತಂಡವಲ್ಲ. ಇಲ್ಲಿ ಅನುಭವಿಗಳಿಗೆ ಕೊರತೆಯಿಲ್ಲ. ಶೇನ್ ವ್ಯಾಟ್ಸನ್ ಆರಂಭದ ಶಕ್ತಿ, ಧೋನಿಯ ಫಿನಿಶಿಂಗ್ ಟಚ್ ತಂಡದ ಶಕ್ತಿ. ಜತೆಗೆ ಇಮ್ರಾನ್ ತಾಹಿರ್ ಇಲ್ಲಿನ ನಿಧಾನಗತಿಯ ಪಿಚ್ ನಲ್ಲಿ ಮ್ಯಾಜಿಕ್ ಮಾಡಬಲ್ಲರು. ಹೀಗಾಗಿ ಎರಡೂ ತಂಡಗಳೂ ಬಲಾಢ್ಯವಾಗಿದ್ದು, ಒಂದು ರೋಚಕ ಪಂದ್ಯವಾಗುವುದರಲ್ಲಿ ಡೌಟೇ ಇಲ್ಲ.