ಐಪಿಎಲ್ 14: ಪ್ಲೇ ಆಫ್ ಗೇರಿದ ಮೊದಲ ತಂಡ ಚೆನ್ನೈ

ಶುಕ್ರವಾರ, 1 ಅಕ್ಟೋಬರ್ 2021 (08:45 IST)
ದುಬೈ: ಐಪಿಎಲ್ 14 ರಲ್ಲಿ ಪ್ಲೇ ಆಫ್ ಗೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಚೆನ್ನೈ ಸೂಪರ್ ಕಿಂಗ್ಸ್ ಪಾತ್ರವಾಯಿತು. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 6 ವಿಕೆಟ್ ಗಳಿಂದ ಗೆದ್ದ ಚೆನ್ನೈ ಪ್ಲೇ ಆಫ್ ಗೇರಿತು.

 
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.

ಈ ಸುಲಭ ಮೊತ್ತ ಬೆನ್ನತ್ತಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಋತುರಾಜ್ ಗಾಯಕ್  ವಾಡ್‍ 45, ಫಾಡು ಪ್ಲೆಸಿಸ್ 41 ರನ್ ಗಳಿಸಿದರು. ಬಳಿಕ ಸುರೇಶ್ ರೈನಾ 2, ಮೊಯಿನ್ ಅಲಿ 17 ರನ್ ಗೆ ವಿಕೆಟ್ ಒಪ್ಪಿಸಿದರು. ಹಾಗಿದ್ದರೂ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದ ಕಾರಣ ಚೆನ್ನೈಗೆ ಕೊನೆಯ ಮೂರು ಎಸೆತಗಳಿಂದ ಎರಡು ರನ್ ಗಳಿಸುವ ಅನಿವಾರ್ಯತೆಯಿತ್ತು. ಆಗ ಕ್ರೀಸ್ ನಲ್ಲಿದ್ದ ಧೋನಿ ಮತ್ತೆ ತಮ್ಮ ಫಿನಿಶರ್ ರೂಪ ತೋರಿದರು. ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ಕೊಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ