ಭಾರತ ಮಹಿಳಾ ಕ್ರಿಕೆಟ್ ತಂಡದ ಮೊದಲ ಪಿಂಕ್ ಬಾಲ್ ಟೆಸ್ಟ್ ಇಂದಿನಿಂದ

ಗುರುವಾರ, 30 ಸೆಪ್ಟಂಬರ್ 2021 (09:25 IST)
ಸಿಡ್ನಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಇಂದು ಐತಿಹಾಸಿಕ ದಿನ. ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ತಂಡ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುತ್ತಿದೆ.


ಇಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕೈಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಇದಕ್ಕೂ ಮೊದಲು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯವನ್ನು ಗೆದ್ದುಬೀಗಿತ್ತು. ಇದೀಗ ಅದೇ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ.

ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಎರಡನೆಯ ಪಿಂಕ್ ಬಾಲ್ ಟೆಸ್ಟ್ ಆಗಲಿದೆ. ಈ ಪಂದ್ಯಕ್ಕೆ ಭಾರತಕ್ಕೆ ಅನುಭವಿ ಬ್ಯಾಟ್ಸ್ ಮನ್ ಹರ್ಮನ್ ಪ್ರೀತ್ ಕೌರ್ ಅನುಪಸ್ಥಿತಿ ಕಾಡಲಿದೆ. ಆದರೂ ಬ್ಯಾಟಿಂಗ್ ನಲ್ಲಿ ಮಿಥಾಲಿ ರಾಜ್, ಶಫಾಲಿ ವರ್ಮ, ಸ್ಮೃತಿ ಮಂಥನಾ ಸ್ಟಾರ್ ಆಟಗಾರ್ತಿಯರಾಗಿದ್ದಾರೆ. ಬೌಲಿಂಗ್ ನಲ್ಲಿ ಜೂಲನಾ ಗೋಸ್ವಾಮಿ ಭಾರತದ ಶಕ್ತಿ. ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ