ಐಪಿಎಲ್ 14: ಡೆಲ್ಲಿ ಕ್ಯಾಪಿಟಲ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು

ಮಂಗಳವಾರ, 20 ಏಪ್ರಿಲ್ 2021 (09:18 IST)
ಚೆನ್ನೈ: ಐಪಿಎಲ್ 14 ರಲ್ಲಿ ಇಂದು ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಒಂದು ರೀತಿಯಲ್ಲಿ ಇದು ಸಮಬಲರ ನಡುವಿನ ಕಿತ್ತಾಟ ಎಂದರೂ ತಪ್ಪಾಗಲಾರದು.


 ಈ ಬಾರಿಯ ಕೂಟದಲ್ಲಿ ಮೊದಲ ಪಂದ್ಯವನ್ನೇ ಸೋತಿದ್ದ ಮುಂಬೈ ಇಂಡಿಯನ್ಸ್ ಈಗಷ್ಟೇ ಹಳಿಗೆ ಬರುತ್ತಿದೆ. ಮುಂಬೈ 3 ಪಂದ್ಯಗಳ ಪೈಕಿ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಅತ್ತ ಡೆಲ್ಲಿ ಕೂಡಾ ಎರಡರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇವೆರಡೂ ಈಗ ಆರ್ ಸಿಬಿ ಬಳಿಕ ಸ್ಥಿರ ಪ್ರದರ್ಶನ ನೀಡುತ್ತಿರುವ ಎರಡು ತಂಡಗಳು. ಮುಂಬೈಗೆ ನಾಯಕ ರೋಹಿತ್ ಶರ್ಮಾ ಶಕ್ತಿಯಾದರೆ, ಅತ್ತ ಡೆಲ್ಲಿಗೆ ಇನ್ ಫಾರ್ಮ್ ಬ್ಯಾಟ್ಸ್ ಮನ್ ಶಿಖರ್ ಧವನ್ ಶಕ್ತಿ. ಈ ಸಮಬಲರ ನಡುವಿನ ಕಾಳಗ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ