ಐಪಿಎಲ್ 14 ಸೆಕೆಂಡ್ ಇನಿಂಗ್ಸ್ ಇಂದಿನಿಂದ ಶುರು
ಅದರಲ್ಲೂ ಆರ್ ಸಿಬಿ ಕಳೆದ ಎಲ್ಲಾ ಋತುವಿಗಿಂತಲೂ ಸುಧಾರಿತ ಪ್ರದರ್ಶನ ನೀಡಿತ್ತು. ಅದೇ ರೀತಿ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತಾ ಕಾದು ನೋಡಬೇಕಿದೆ. ಪಂಜಾಬ್ ಮತ್ತು ಡೆಲ್ಲಿ ತಂಡಕ್ಕೆ ಒಟ್ಟು 8 ಪಂದ್ಯಗಳು ನಡೆದಿವೆ. ಉಳಿದೆಲ್ಲಾ ತಂಡಗಳಿಗೆ ತಲಾ 7 ಪಂದ್ಯಗಳನ್ನಾಡಲಷ್ಟೇ ಸಾಧ್ಯವಾಗಿದೆ. ಕ್ವಾರಂಟೈನ್ ಕಟ್ಟು ನಿಟ್ಟಿನ ನಿಯಮಾಳಗಳಿಂದಾಗಿ ಹೆಚ್ಚಿನ ತಂಡಗಳಲ್ಲಿ ಕೆಲವು ಆಟಗಾರರು ಮಿಸ್ ಆಗಿದ್ದು, ಹೊಸ ಆಟಗಾರರ ಸೇರ್ಪಡೆಯಾಗಿದೆ. ಹೀಗಾಗಿ ಐಪಿಎಲ್ 14 ರ ಮುಂದುವರಿದ ಭಾಗವೇ ಆದರೂ ಇದು ಹೊಸ ಸೀಸನ್ ನಂತೆಯೇ ಭಾಸವಾಗುತ್ತಿದೆ.