ಐಪಿಎಲ್ 2022: ಸಿಎಸ್ ಕೆಗೆ ದೊಡ್ಡ ಅಂತರದ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 41, ಕಾನ್ವೇ 87, ಶಿವಂ ದುಬೆ 32 ರನ್ ಗಳಿಸಿದರು. ಧೋನಿ ಕೇವಲ 8 ಎಸೆತಗಳಲ್ಲಿ ಅಜೇಯ 21 ರನ್ ಸಿಡಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಬ್ಯಾಟಿಂಗ್ ಕೈ ಕೊಟ್ಟಿತು. ಡೇವಿಡ್ ವಾರ್ನರ್ 19, ಮಿಚೆಲ್ ಮಾರ್ಷ್ 25, ರಿಷಬ್ ಪಂತ್ 21 ರನ್, ಶ್ರಾದ್ಧೂಲ್ ಠಾಕೂರ್ 24 ರನ್ ಗಳಿಸಿದರು. ಆದರೆ ಯಾರೂ ದೊಡ್ಡ ಮೊತ್ತ ಗಳಿಸಲೇ ಇಲ್ಲ. ಇದರಿಂದಾಗಿ ಡೆಲ್ಲಿ 17.4 ಓವರ್ ಗಳಲ್ಲಿ 117 ರನ್ ಗಳಿಗೆ ಆಲೌಟ್ ಆಯಿತು.