ಸ್ಪೀಡ್ ಎಕ್ಸ್ ಪ್ರೆಸ್ ಉಮ್ರಾನ್ ಮಲಿಕ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಲು ಹೆಚ್ಚಿದ ಒತ್ತಡ

ಭಾನುವಾರ, 8 ಮೇ 2022 (11:01 IST)
ಮುಂಬೈ: ಐಪಿಎಲ್ 2022 ರಲ್ಲಿ ಸತತವಾಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಬಾಲ್ ಎಸೆಯುತ್ತಿರುವ ವೇಗಿ ಉಮ್ರಾನ್ ಮಲಿಕ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುವ ಉಮ್ರಾನ್ ಈ ಋತುವಿನ ಹೊಸ ಪ್ರತಿಭೆ. ಇದುವರೆಗೆ ಅವರು 15 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಗಂಟೆಗೆ 157 ಕಿ.ಮೀ. ವೇಗದ ಎಸೆತ ಹಾಕಿ ದಾಖಲೆ ಮಾಡಿದ್ದ ಉಮ್ರಾನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಒತ್ತಾಯ ಕೇಳಿಬರುತ್ತಿದೆ.

ಅವರ ಪ್ರಸಕ್ತ ಫಾರ್ಮ್ ಗಮನಿಸಿದರೆ ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ