ಐಪಿಎಲ್ 2022: ಮೂರನೇ ಬಾರಿಗೆ ಕೊಹ್ಲಿ ಗೋಲ್ಡನ್ ಡಕ್

ಭಾನುವಾರ, 8 ಮೇ 2022 (18:27 IST)
ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ಬಂದ ಬಾಲ್ ಗೇ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.

ಇದರೊಂದಿಗೆ ಇದೇ ಐಪಿಎಲ್ ಟೂರ್ನಿಯಲ್ಲಿ ಅವರು ಮೂರನೇ ಬಾರಿಗೆ ಗೋಲ್ಡನ್ ಡಕ್ ಆದ ಕುಖ್ಯಾತಿಗೊಳಗಾದರು. ಕಳಪೆ ಫಾರ್ಮ್ ನಿಂದಾಗಿ ಕೊಹ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ಕೊಂಚ ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ ಈಗ ಮತ್ತೆ ಆರಂಭಿಕರಾಗಿ ಬಂದು ಮೊದಲ ಎಸೆತದಲ್ಲೇ ಔಟಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ