ಐಪಿಎಲ್ 2022: ಆರ್ ಸಿಬಿಗೆ ಇಂದು ಗುಜರಾತ್ ಕಠಿಣ ಎದುರಾಳಿ

ಶನಿವಾರ, 30 ಏಪ್ರಿಲ್ 2022 (05:55 IST)
ಮುಂಬೈ: ಐಪಿಎಲ್ 2022 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ.

ಉತ್ತಮ ಫಾರ್ಮ್ ನಲ್ಲಿದ್ದ ಆರ್ ಸಿಬಿ ಕಳೆದ ಮೂರು ಪಂದ್ಯಗಳಿಂದ ಮಂಕಾಗಿದೆ. ದಿನೇಶ್ ಕಾರ್ತಿಕ್, ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ವೆಲ್, ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತ್ತು. ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಸರಿಪಡಿಸಿಕೊಳ್ಳಬೇಕಿದೆ.

ಇತ್ತ ಗುಜರಾತ್ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಹಾರ್ದಿಕ್ ಪಡೆ ಎಲ್ಲಾ ವಿಭಾಗದಲ್ಲೂ ಚೇತೋಹಾರಿ ಪ್ರದರ್ಶನ ನೀಡುತ್ತಿದ್ದು, ಅಗ್ರ ಸ್ಥಾನದಲ್ಲಿದೆ. ಹೀಗಾಗಿ ಆರ್ ಸಿಬಿಗೆ ಗುಜರಾತ್ ಸೋಲಿಸುವುದು ಸುಲಭವಲ್ಲ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ