ಐಪಿಎಲ್ 2022: ಕುಚಿಕು ಗೆಳೆಯರಾದ ಮಯಾಂಕ್-ರಾಹುಲ್ ತಂಡಗಳ ನಡುವೆ ಕಾದಾಟ

ಶುಕ್ರವಾರ, 29 ಏಪ್ರಿಲ್ 2022 (09:00 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಕುಚಿಕು ಗೆಳೆಯರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ನೇತೃತ್ವದ ತಂಡಗಳು ಪರಸ್ಪರ ಸೆಣಸಲಿವೆ.

ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ರಾಹುಲ್ ಈ ಹಿಂದೆ ಪಂಜಾಬ್ ನಾಯಕರಾಗಿದ್ದರಿಂದ ಆ ತಂಡದ ಹುಳುಕುಗಳು ಅವರಿಗೆ ಚೆನ್ನಾಗಿಯೇ ಪರಿಚಯವಿರುತ್ತದೆ. ಪ್ರಚಂಡ ಫಾರ್ಮ್ ನಲ್ಲಿರುವ ರಾಹುಲ್ ರನ್ನು ಕಟ್ಟಿ ಹಾಕುವುದು ಎದುರಾಳಿಗಳಿಗೆ ಸವಾಲಾಗಲಿದೆ.

ಅತ್ತ ಕಿಂಗ್ಸ್ ಪಂಜಾಬ್ ಮಯಾಂಕ್ ಅಗರ್ವಾಲ್ ಫಾರ್ಮ್ ನ ಚಿಂತೆಯಲ್ಲಿದೆ. ಹಾಗಿದ್ದರೂ ಶಿಖರ್ ಧವನ್ ಬ್ಯಾಟಿಂಗ್ ಗೆ ಬಲ ತುಂಬುತ್ತಿದ್ದಾರೆ. ಜೊತೆಗೆ ಕಳೆದ ಪಂದ್ಯದ ಗೆಲುವು ಪಂಜಾಬ್ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ