ಐಪಿಎಲ್ 2022: ಮತ್ತೆ ಗೆಲ್ಲದ ಮುಂಬೈ, ಪಂಜಾಬ್ ಗೆ ರೋಚಕ ಜಯ
ಕಿಂಗ್ಸ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ 12 ರನ್ ಗಳ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಶಿಖರ್ ಧವನ್ 70 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಮುಂಬೈ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ರೋಹಿತ್ ಶರ್ಮಾ 28, ಡಿವಾಲ್ಡ್ ಬ್ರೆವಿಸ್ 49, ತಿಲಕ್ ವರ್ಮ 36, ಸೂರ್ಯಕುಮಾರ್ ಯಾದವ್ 43 ರನ್ ಗಳಿಸಿದರು. ಇದರೊಂದಿಗೆ ರೋಹಿತ್ ಪಡೆ ಮತ್ತೊಂದು ಸೋಲು ಅನುಭವಿಸಿತು.