ಐಪಿಎಲ್ 2022: ಕಿಂಗ್ಸ್ ಪಂಜಾಬ್, ಗುಜರಾತ್ ಕಾದಾಟ

ಶುಕ್ರವಾರ, 8 ಏಪ್ರಿಲ್ 2022 (08:59 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಕಿಂಗ್ಸ್ ಪಂಜಾಬ್ ತಂಡ ಮತ್ತು ಗುಜರಾತ್ ಟೈಟಾನ್ಸ್ ಎದುರಾಗಲಿದೆ.

ಮಯಾಂಕ್ ಅಗರ್ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ಆರಂಭಿಕ ಪಂದ್ಯಗಳಿಂದ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ. ಹೀಗಾಗಿ ಇಂದೂ ಅದೇ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದೆ.

ಅತ್ತ ಗುಜರಾತ್ ಕೂಡಾ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಇದುವರೆಗೆ ಸೋಲನ್ನೇ ಕಂಡಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ಗುಜರಾತ್ ಪಡೆಗೆ ಇಂದು ಕಠಿಣ ಸವಾಲು ಎದುರಾಗಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ